Munde Saagu
ಯಾರೇನೆ ಹೇಳಲಿ
ಮುಂದೆ ಸಾಗು ನೀ ಮುಂದೆ ಸಾಗು ನೀನು
ಬೆನ್ ಹಿಂದೆ ಮಾತನಾಡಲಿ ಮುಂದೆ ಸಾಗು ನೀ ಮುಂದೆ ಸಾಗು ನೀನು
ಬರಿ ಮಾತಾಯ್ತು ನಿಂದು
ಸರಿ ಸಾಕು ಮಾಡು ಇಂದು
ನಿನ್ನ ಕಣ್ಣ ಸುತ್ತವು ಕಾಣುವುದೊಂದೆ
ಕನಸಲು ಕೂಡ ಗೆಲಬೇಕೆಂದೆ
ಅಲ್ಲ ನೀನು ಸೋಮಾರಿ
ಹೋಗಬೇಡ ಯಾಮಾರಿ
ಯಾರಪ್ಪನ ಮನೆ ಗಂಟಲ್ಲ ಮಚ್ಚ ಗೆಲುವು ಅನ್ನುವ ಸಾಧನೆ
ಒಪ್ಪೊತ್ತಿನ ಊಟ ಬಿಡೋದಾಗ್ಲಿ ಮಾಡ್ ಗೆಲ್ತೀನ್ ಅನ್ನೋ ಯೋಚನೆ
ಒಂದು ಸೂಚನೆ ಪರಿವರ್ತನೆ ಆಗ್ಬೇಕು ಈಗ ನಿನ್ನಿಂದನೆ
ಸೋತಾಗ ಬರದ ಬೋಳಿಮಕ್ಳು ಈಗ ಗೆದ್ರೆ ಬರ್ತರೆ ಬೇಗನೆ
ಗೊತ್ತಲ್ವ ಮಚ್ಚ ನೀನು ಗೆದ್ರೆ ಊರು ತುಂಬ ಜಾತ್ರೆನೆ
ನಿಂಗೆ ನೀನೆ ಇಲ್ಯಾರು ಇಲ್ಲ ನಿನ್ನೋವ್ರು ಅನ್ನೋದು ಶುದ್ಧ ಸುಳ್ಳು
ಇನ್ನು ಕೂಡ ನೀನ್ ನಾಳೆ ಅನ್ಕೊಂಡು ಕೂತ್ರೆ ನಿನ್ನ ಮನೆ ಹಾಳು
ನಿನ್ನ ನೀನೆ ರೆಡಿ ಮಾಡ್ಕೋ ಬೇಗ
ಮುಂದೆ ಬರುವ ಕಷ್ಟಕೀಗ
ಸಮಸ್ಯೆ ಅನ್ನೋದು ಯಾರಿಗಿಲ್ಲ ತಲೆ ಎತ್ತಿನಿಲ್ಲು ನಿನ್ ಟೈಮ್‌ಬಂದಾಗ
Expiry date ನಿನ ಕನಸಿಗಿಲ್ಲ
ಗಟ್ಟಿ ಮಾಡ್ಕೋ ನಿನ್ನ ಮನಸ ಮೆಲ್ಲ
ಕೆಟ್ಟೋದ ಗಡಿಯಾರ ಕೂಡ ದಿನಕೆ ಎರಡ್ ಸಲ ಸರಿ ಟೈಮ್ ತೋರ್ಸುತಲ್ಲ
ಬಿಡು ಬಿಡು ಬಿಡು ಬಿಟ್ಟಾಕು
ನಿನ್ ಮನದ ನೋವೆಲ್ಲ ಸುಟ್ಟಾಕು
ಮೊದ್ಲು ಕಲಿ ನಿನ್ ನೀನೆ ಪ್ರೀತ್ಸೋದು
ಹೋಗೊವ್ರ್ ಹೋಗ್ಲಿ ನೀನ್ ಸ್ಟೆಪ್ ಹಾಕು
ಯಾರೇನೆ ಹೇಳಲಿ ಮುಂದೆ ಸಾಗು
ಬೆಳಿಗೆ ಎದ್ ತಕ್ಷಣ ಕೇಳುತಿನಿ ನನ್ನೆ ನಾನು
22 ಆಯ್ತು ಮಾಡಲಿಲ್ಲ ಇನ್ನು ಏನು
ಉಪವಾಸ ಮಲ್ಗಿದಿನಿ
ಒಬ್ಬೊಬ್ನೆ ಅತ್ತಿದಿನಿ
ಯಾರಿಲ್ದೆ ಬದ್ಕೋದನ್ನ 8th ಅಲ್ಲೆ ಕಲ್ತಿದಿನಿ
ಹಾ ಬಿಟ್ಟಾಕಿದಿನಿ ಬಿಟ್ಟೋದವ್ರನ್ನ
ನನ್ ಸಿಹಿ ನೆನಪನ್ನೆಲ್ಲ ಸುಟ್ಟಾಕ್ದವ್ರನ್ನ
ಭಯದ ಛಾಯೆ ನನ್ನಲಿಲ್ಲ ಈಗ I'm a fighter
ಯಾಕಂದ್ರೆ ಸಾವ್ರ ಸಲ ಸೋತು ಆಗಿದಿನಿ stronger
ಕಷ್ಟಪಟ್ಟು ಮೇಲೆ ಬರ್ತಿದಿನಿ
ಬದಲಾವಣೆ ತರ್ತಿದಿನಿ ಬಿದ್ದಿದಿನಿ
ಎದ್ದಿದಿನಿ ಗೆಲ್ಲೋದನ್ನು ಸೋತಿದಿನಿ
ನಾಳೆ ಸತ್ರು ಪರ್ವಾಗಿಲ್ಲ ಇನ್ನು ಹತ್ತ್ ವರ್ಷಕ್ಕಾಗೊವಷ್ಟು ಬರ್ದಿದಿನಿ ಯೋ
ಟೀಕೆ ಪ್ರಶ್ನೆಗಳಿವೆ ನನ್ನ ಮುಂದೆ ಸಾವಿರ
ನಾನ್ ಸ್ವಲ್ಪ ಬ್ಯುಸಿ ನನ್ನ ಗೆಲುವೆ ಪ್ರಶ್ನೆಗಳಿಗೆ ಉತ್ತರ
ತತ್ತರ ನಾನ್ ಕೊಡೊ ಕೌಂಟರ್ ಗೆ ನೀ ಬಲಿಯಾಗ ಬೇಡ ನನ್ ಪದಗಳ ಎನ್ಕೌಂಟರ್ ಗೆ
ಯಾರೇನೆ ಹೇಳಲಿ ಮುಂದೆ ಸಾಗು ನೀ
ನೀ ಬಿದ್ದಾಗ ನಿನ್ನವರು ಇಲ್ಲ ಯಾರು
ನೀ ಗೆದ್ದಾಗ ನಿನ್ನವರು ಇಲ್ಲಿ ಸಾವಿರಾರು
ನೀ ಪಡುವ ಶ್ರಮವೇ ನಿನ್ನ ದೇವರು
ಕಾಯಕವೇ ಕೈಲಾಸ ನೀ ಮುಂದೆ ಸಾಗುತಿರು
ಯಾರೇನೆ ಹೇಳಲಿ ಮುಂದೆ ಸಾಗು ನೀ